Monday, July 12, 2010

ಬ್ಲಾಗ್ ಬರದರೆ Life ಪೂರ್ತಿ ಆವುತ್ತಾ?

ಎಂತ ಗೊಂತಿದ್ದಾ?
ಬ್ಲಾಗ್ ಬರದರೆ Life ಪೂರ್ತಿ ಆವುತ್ತಾ? - ಹೀಂಗೆ ಕೇಳಿದ್ದು ಎನ್ನ ಬೆಸ್ಟ್ friend ಶೈಲ. 


ಎಂಗಳಲ್ಲಿಗೂ ಅದರ ಮನೆಗೂ net ಬಂದದು ಒಟ್ಟೊಟ್ಟಿಂಗೆ.
ಎನ್ನ ಕಂಪ್ಯೂಟರಿಂಗೆ ಮೋಡೆಮ್ ಕನೆಕ್ಟ್ ಆಗಿ ಎರಡು ದಿನಲ್ಲಿ ಅದರದ್ದುದೇ up ಆಯಿದು.
ಎಂಗೊ ಒಟ್ಟಿಂಗೇ browse ಮಾಡ್ಳೆ ಸುರು ಮಾಡಿದ್ದು. 

ಮೊದಲೇ ಪೇಟೆಲಿಪ್ಪ Net Cefe ಲಿ ಬ್ರೌಸ್ ಮಾಡಿದ್ದರೂ, ಮನೆಲೇ ಆನ್ ಲೈನ್ ಬಂದದು ಒಟ್ಟೊಟ್ಟಿಂಗೇ. 
ಹೊಸ ಹೊಸ inventions ಒಟ್ಟೊಟ್ಟಿಂಗೇ ನೋಡಿದ್ದು. EMail ಐಡಿ ಯನ್ನುದೇ ಒಟ್ಟಿಂಗೇ Create ಮಾಡಿದ್ದು.
Orkut ಪ್ರೊಪೈಲ್ ಒಟ್ಟೊಟ್ಟಿಂಗೇ ಮಾಡಿದ್ದು. ಒಟ್ಟಿಂಗೆ ತುಂಬ ಚಾಟ್ ದೇ ಮಾಡಿಕೊಂಡು ಇತ್ತಿದ್ದೆಯೊ.
ಎಂಗಳ ಮನಸ್ಸಿಲಿ ಇದ್ದ ವೇವ್ ಲೆಂತ್ (wave length) ಮ್ಯಾಚ್ ಆಗಿಯೊಂಡಿತ್ತು.

ಕೆಲವು ಸರ್ತಿ ಅದು ಅದರ ಊರಿಗೆ ಹೋದ್ರೆ ಎರಡು ಮೂರು ದಿನಲ್ಲಿ phone ಅಥವಾ sms ಮಾಡಿ ಅದರ ಈಮೈಲ್ ಚೆಕ್ ಮಾಡ್ಳೆ ಹೇಳಿಕಂಡಿತ್ತು.
ಎಂಗ ಎಲ್ಲವನ್ನೂ share ಮಾಡಿಕೊಂಡು ಇತ್ತಿದ್ದೆಯೊ. ಈಮೈಲ್ ಐಡಿ, ಪ್ರೆಂಡ್-ಶಿಪ್, ಪಾಸ್ವರ್ಡ್ ಗೊ, ಎಲ್ಲವುದೆ.

ಮುಂದೆ ಅದರ ಮತ್ತೆ ಎನ್ನ Taste ಬದಲಪ್ಪಲೆ ಸುರು ಆತು.
ಎನಗೆ ಪುಸ್ತಕಲ್ಲಿ ಆಸಕ್ತಿ ಆದರೆ ಅದಕ್ಕೆ fashion ಲಿ, ಎನಗೆ ಬರವಣಿಗೆಲಿ ಹೆಚ್ಚು ಒಲವು, ಅದಕ್ಕೆ sports.
ಎಲ್ಲೋ ಒಂದು ಹಂತಲ್ಲಿ, ಎಂಗಳ ಇಬ್ರ wavelength ಮ್ಯಾಚೇ ಆವುತ್ಲೆ ಹೇಳುವಷ್ಟು difference ಆತು.
But still, ಎಂಗಳ friendship ಹಾಂಗೇ ಇತ್ತು. ಅದುವೆ ಅಲ್ಲದ - understanding.

ಮೊನ್ನೆ, ಇದ್ದಕ್ಕಿದ್ದ ಹಾಂಗೆ ಮನೆಗೆ ಬಂತು.
Mangalore ಲಿ ದೊಡ್ಡ fashion shop ಓಪನ್ ಆಯಿದು, ಸುನಿಲ್ ಶೆಟ್ಟಿ ಬಯಿಂದಡ - ಹೋಪನ ಕೇಳಿತ್ತು.
ಓಹ್! ನೋ!! ಎನಗೆ ಎಕ್ಸಾಮ್ ಮುಗುದು, ಈಗ ಜಸ್ಟ್ ರಜೆ ಸಿಕ್ಕಿದ್ದಷ್ಟೆ.
ಸುಮಾರು ದಿನದ ಬ್ಲಾಗ್ ಅಪ್ಡೇಟ್ ಬಾಕಿ ಇತ್ತು. readers ಕೆಲವು ಜನ ಮೈಲ್ ಮಾಡ್ಳೆ start ಮಾಡಿತ್ತಿದ್ದವು.
ಅದಲ್ಲದ್ದೆ ಇಂದು headache ಜೋರಿತ್ತು. ಎರಡುಮೂರು ಗಂಟೆ ನಿಂದೊಂಡು ಶಾಪ್ ಮಾಡುವಷ್ಟು ಪೇಶೆನ್ಸ್ ಇತ್ತಿಲ್ಲೆ.
So, ಇಂದು ಬೇಡ, ಇನ್ನೊಂದರಿ ಹೋಪ - ಹೇಳಿದೆ.

ಅದಕ್ಕೆ ಎನ್ನ ಈ ಆನ್ಸರಿಂದ ತುಂಬಾ disappoint ಆತು ಹೇಳಿ ಕಾಣ್ತು. But ಎನ್ನ feelings ಗಳ ಅರ್ತವೇ ಮಾಡಿದ್ದಿಲ್ಲೆ ಆ friend.

ಮನೆಲಿ ಕೂದು ಎಂತ ಮಾಡ್ತೆ ನೀನು? ಕೇಳಿತ್ತು.
ಎಷ್ಟೋ ದಿನಂದ ಪೆಂಡಿಂಗ್ ಇಪ್ಪ ಬ್ಲಾಗ್ ಅಪ್-ಡೇಟ್ ಮಾಡ್ತೆ.. ಹೇಳಿದೆ, ಕೂಲ್ ಆಗಿ!

ಅಷ್ಟಪ್ಪಗ ಅದು ಕೇಳಿದ ಮಾತೇ ಇಂದ್ರಾಣ ಟೈಟಲ್.
ಬ್ಲಾಗ್ ಬರದರೆ ನಿನ್ನ Life ಪೂರ್ತಿ ಆವುತ್ತಾ? ಲೈಫ್ ಲಿ ಎಲ್ಲವನ್ನೂ ಅನುಬವಿಸಿರೆಕ್ಕು. ಈ age ಲಿ ಬ್ಲಾಗ್, ರೈಟಿಂಗ್ ಹೇಳಿ ಸುಮ್ಮನೆ ಕಂಪ್ಯೂಟರ್ ಎದುರು ಕೂರೆಡ, ರಜ ಹೆರ ತಿರುಗುವ, ಮುಂದೆ ಗಂಡ, family ಹೇಳಿ ಒಂದೊಂದೇ ಸೇರುವಗ ಜೀವಮಾನ ಇಡೀ ಮನೆ ಒಳವೇ ಇರೆಕ್ಕು.
ಈಗ ತಿರುಗುವ right time ಹೇಳಿತ್ತು.
ಆ ದಿನ ಮತ್ತೆ ಇಬ್ರೂ ಮ್ಯಾಂಗಲೋರ್ ಗೆ ಹೋಗಿ, ಅದಕ್ಕೆ ಬೇಕಾಗಿ ಶಾಪ್ ಮಾಡಿ ಬಂದದು. ಈ ತರ ಎಷ್ಟೋ adjustments ಬೈಂದು life ಲಿ. ಇದೆಂತ ಹೊಸತ್ತಲ್ಲ.

ಒಂದೇ ಕ್ಲಾಸ್, ಒಂದೇ age, ಆದರೆ thinking ಎಷ್ಟು different, ಅಲ್ಲದಾ?
Still, we are best friends.

ಅದರ ರಿಲೇಟಿವ್ ಮನೆಗೆ ಹೋಯಿದು. ಒಂದು ವೀಕ್ ಕಳುತ್ತು!
I miss her now.

2 comments:

 1. ಒಹ್ಹೋಹ್ಹೋ.... ಎಂತ ಒಪ್ಪಕ್ಕೋ.... ನಾಕು ತಿಂಗಳಾತು ನಿನ್ನ ಕಾಣದ್ದೆ.... ಅಸಕ್ಕ ಆಯಿಕ್ಕೊಂಡಿತ್ತು...:( ಅಂತೂ ಬಂದೆನ್ನೆ... ಸಮಾಧಾನ. ಹೇಂಗಾತು ಎಕ್ಸಾಮೆಲ್ಲ? ಅಜ್ಜನ ಮನಗೆ ಹೋಯಿದೆಯ? ಮಾವ ಮೊನ್ನೆ ಸಿಕ್ಕಿತ್ತಿದ್ದವು.... ಮಗನ ಮದುವೆಲಿ ಬಿಸಿ ಅಲ್ಲದ...?

  ಮಾಣಿ.
  ಆಚಕರೆ

  ReplyDelete
 2. ಅಂತೂ ಬರೆದನ್ನೆ... ಲಾಯ್ಕಾ ಬರದ್ದೆ ಆತೋ ಏ°...
  ಆಕಸ್ಮಾತ್‌ ಆಗಿ ನಿನ್ನ ಬ್ಲಾಗಿಂಗೆ ಬಂದೆ..ಅಪ್‌ಡೇಟ್‌ ಆಗಿತ್ತು.. ಖುಷಿಯಾತು..
  ಅಂದ ಹಾಂಗೆ ಈ ಭಾಷೆಯ ಹಂಗ್ಲಿಷ್‌ (ಹವ್ಯಕ+ ಇಂಗ್ಲಿಷ್‌) ಹೇಳಿ ದಿನೆಗೊಳುವನೊ.....?!

  ReplyDelete