Saturday, April 10, 2010

ನೀರುಳ್ಳಿಬಜೆ ತಿಂಬಗ ಎಲ್ಲೊರುದೇ ನೆಗೆಮಾಡಿದವು, ಗೊಂತಿದ್ದಾ?

ಎಂತ ಗೊಂತಿದ್ದಾ!
ಹಳೆಯ ನೆನಪ್ಪು ಎಲ್ಲ ಮಸ್ಕು ಮಸ್ಕು ಆದಷ್ಟು ಅದ್ರ ರುಚಿ ಜಾಸ್ತಿ ಹೇಳಿ ಚಟ್‌ಪಟಾಕಿ ಹೇಳ್ತ.
ಅಪ್ಪ? ಉಮ್ಮಪ್ಪ!

ಇದು ಎನ್ನ Nostalgia (Old memories)ಗಳಲ್ಲಿ ಒಂದು.
ಸಣ್ಣಾಗಿಪ್ಪಗ ಅಜ್ಜನ ಮನೆಗೆ ಹೋಪದು ಹೇಳಿರೆ ಒಂದು ಕುಶಿ..
ಅಲ್ಲಿ ಬಾವಂದ್ರು, ಅತ್ತಿಗೆ ಎಲ್ಲ ಆಟ ಆಡುದು. ಬೊಬ್ಬೆ ಗಲಾಟೆ ಆಗಿ ’ಸುಮ್ಮನೆ ಕೂತುಕೊಳಿ ಮಕ್ಕಳೆ ನಿಂಗೊ’ ಹೇಳಿ ಅಮ್ಮ ಜೋರು ಮಾಡುವ ವರೆಗೂ full busy.
ಜೋರು ಮಾಡಿರೆ ಮತ್ತೆ full silent ಆಗಿ ಬಿಡ್ತು!

ಎನಗೆ ಸಣ್ಣ ಇಪ್ಪಾಗ ನೀರುಳ್ಳಿ (Onion) ಮೆಚ್ಚಿಗೊಂಡು ಇತ್ತಿಲ್ಲೆ. ನೆಂಟ್ರಮನೆಗೆ ಹೋಗಿಪ್ಪಗ ಎಲ್ಲ ಅಪ್ಪಮ್ಮ "ನೀರುಳ್ಳಿ ಹಾಕಿದ್ದಾ?ಒಪ್ಪಕ್ಕಂಗೆ ಕೊಡೆಡಿ" ಹೇಳಿಕೊಂಡು ಇತ್ತಿದ್ದು ನೆನಪ್ಪು ಬತ್ತು. ಆನಾಗಿಯೇ ನೀರುಳ್ಳಿ ಆಗ ಹೇಳಿದ್ದು ನೆನಪ್ಪಿಲ್ಲೆ. ಎನ್ನ ಅಪ್ಪಮ್ಮ ಹೇಳುದು ಕೇಳಿಯೇ ಎನಗೆ ನೀರುಳ್ಳಿ ಆಗ ಹೇಳಿ ಆದ್ದು. Mostly, ಅದರಿಂದ ಮೊದಲು ಯಾವದೋ ಒಂದು ಹಂತಲ್ಲಿ ಆನು ಬೇಡ ಹೇಳಿದ್ದನೋ? ಉಮ್ಮಪ್ಪ!
ಸಣ್ಣಾಗಿಪ್ಪಗ ಎಲ್ಲ ಒಂದರಿ ಆಗ ಹೇಳಿ ಕಂಡ್ರೆ ಮತ್ತೆ try ಮಾಡ್ಳೇ ಇಲ್ಲೆ. ಅಲ್ದಾ?

ಮಾಡಾವತ್ತೆಯ ಮನೆಲಿ ಆದರೆ ಬಳಕೆ ಕಮ್ಮಿ, ಹಾಂಗಾಗಿ ಏನೂ ತೊಂದರೆ ಇಲ್ಲೆ. ಆದರೆ ಮಡಿಕೇರಿ ಮಾವನಲ್ಲಿಗೆ ಹೋದ್ರೆ ಅಲ್ಲಿ ನೀರುಳ್ಳಿ ಹಾಕದ್ದೆ ಅಡಿಗೆಯೇ ಮಾಡಿಕೋಂಡು ಇತ್ತಿದ್ದವಿಲ್ಲೆ. ಎನ್ನ ಅಪ್ಪಮ್ಮಂಗೆ ಎನ್ನ ಆಹಾರ ನೋಡುದೇ ಕೆಲ್ಸ ಆಗಿತ್ತು. ಹೋಟೆಲಿಗೆ ಹೋದರೆ ಅಂತೂ, ಅದು ಬೇಡ, ಇದುಬೇಡ ಹೇಳಿ ಎನ್ನ list ತುಂಬಾ ಉದ್ದ ಇತ್ತು.

ಒಂದರಿ ಅಜ್ಜನ ಮನೆಗೆ ಹೋಗಿದ್ದ ಸಮಯ.
ಆ ದಿನ, ರಜೆ ಇದಾ, ಹಾಂಗೆ ಎಲ್ಲರು ಆಡಿಗೊಂಡು ಇತ್ತಿದ್ದವು.
ಅತ್ತೆಕ್ಕೊ, ಮಕ್ಕೊ ಎಲ್ಲ ಯಾವಗಳೂ ಇದ್ದರೂ, ಮಾವಂದ್ರು ಮನೆಲಿ ಇಪ್ಪದು ತುಂಬ ಅಪುರೂಪ. ಅಂದು ಮೂರು ಜನ ಮಾವಂದ್ರು ಮನೆಲೇ ಇತ್ತಿದ್ದವು. ಎಲ್ಲಾ ಮಾವಂದ್ರು, ಅತ್ತೆಕ್ಕೊ, ಅತ್ತಿಗೆ, ಬಾವಂದ್ರು ಮನೆಲಿ ಇದ್ದಕಾರಣ ಎಲ್ಲರು ತುಂಬ bizi....!

ಹೊತ್ತಪ್ಪಗ ಚಾ ಕುಡಿವಲಪ್ಪಗ ಎಂತಾರು ತಿಂಡಿ ಮಾಡುದು ಅಜ್ಜಿಯ ಕ್ರಮ.
ಎಲ್ಲರು ಕೂದುಗೊಂಡು ತಿಂಬಲೆ ಒಳ್ಳೆ ಆವುತ್ತಲ್ದ, ಅದಕ್ಕೆ.

ಆ ದಿನ ಒಂದು ಪರಿಮ್ಮಳದ ಹೊರುದ ತಿಂಡಿ ಮಾಡಿದವು.
ಅತ್ತೆಯವು, ಅಮ್ಮ ಎಲ್ಲ ಒಳ ಕೆಲಸಕ್ಕೆ ಸೇರಿತ್ತವು, ಹೊರುದ್ದು ಅಜ್ಜಿ.
ಹೊರಿವನ್ನಾರ ಅದುಎಂತದು ಹೇಳಿಯೇ ನೋಡ್ಳೆ ಹೋಯಿದಿಲ್ಲೆ ಎಂಗೊ - ಹೊರಿವಗ ಅದರ ಸ್ಮೆಲ್ ಬಂತಲ್ಲ - ವಾಹ್!


ರಜ ಹೊತ್ತಿಲ್ಲೇ Coffee ತಯಾರಾತು!
ಕಾಫಿ + ಆ ಪರಿಮಳದ ತಿಂಡಿ, ಎರಡೂ ಒಟ್ಟಿಂಗೆ ತಂದು ಹೆರ ಮಡಿಗಿದವು.
ಹೆಮ್ಮಕ್ಕೊ ಒಳ ತಯಾರಿ ಮಾಡಿ ಮಾಡಿ ಹೆರ ಕೂದ ಮಾವಂದ್ರಿಂಗೆ ತಂದು ಕೊಟ್ಟವು.
ಮಾವಂದ್ರು ತಟ್ಟೆ ಕಾಲಿ ಮಾಡಿಮಾಡಿ ಅತ್ತೆಕ್ಕಳ ಹತ್ರೆ ಇನ್ನೂ ತಪ್ಪಲೆ ಹೇಳ್ತಾ ಇತ್ತವು.
ಎಲ್ಲರಿಂಗೂ ಹಂಚಿಗೊಂಡು ಬಪ್ಪಗ ಅತ್ತೆ ಎನ್ನತ್ರವೂ ತಂದವು.
ಪರಿಮ್ಮಳ ಕೇಳಿ ತಿನ್ನೆಕ್ಕೂಳೆ ಆಶೆ ಆತು, ಆದ್ರೆಂತ ಮಾಡುದು..
ಪುಟ್ಟುಮಾವ - ಓ ಅಲ್ಲಿ ಕೂತುಕೊಂಡು ಜೋರು ಹೇಳಿದವು "ಏಯ್, ಅದು ನೀರುಳ್ಳಿ ಹಾಕಿದ್ದು. ಒಪ್ಪಕ್ಕಂಗೆ ಆಗ..!" ಹೇಳಿ.
ಚೇ! ಈ ತಿಂಡಿಗೂ ನೀರುಳ್ಳಿ ಹಾಕಿದ್ದ? ಚೆ ಚೆ.
ಬೇಜಾರಾತು.
ಕಾಫಿ ಮಾತ್ರ ಕುಡ್ದು ಎದ್ದೇಬಿಟ್ಟೆ.

ಒಳ ಹೋಗಿ ನೋಡುವಗ ಅಜ್ಜಿ ಇನ್ನೂ ಹೊರ್ಕೊಂಡು ಇತ್ತವು.
ಅಜ್ಜಿಯತ್ರ ಪೂಸಿಹೊಡದು ಮೆಲ್ಲ ಕೇಳಿದೆ, ಅಜ್ಜೀ - ಒಂದು ತುಂಡು ತಿನ್ನೆಕ್ಕಾ..? - ಹೇಳಿ..
ಅಜ್ಜಿಗೆ ಎನಗೆ ಆಸೆ ಆದ್ದು ಅರ್ತ ಆತು.
ತಿನ್ನು ಒಪ್ಪಕ್ಕೋ, ಇದಾ - ಹದಾ ಬಿಸಿಯ ಒಂದು ತೆಗದು ಕೊಟ್ಟವು.
ಅಜ್ಜಿಯ ಮೇಲೆ ತುಂಬ ಕುಶಿ ಆತು!

ಅದ್ರ ಕೈಲಿ ಹಿಡ್ಕಂಡು ತಿಂಬಲೆ ಹೆರಾಡುವಗ ಪುಟ್ಟುಮಾವ ಎಂತಕೋ ಒಳಬಂದವು ನೋಡಿದವು.
ಅವ್ರದ್ದು ಬೊಬ್ಬೆ ಬಾಯಿ - ಜೋರು ಹೇಳಿದವು, "ಇದಾ, ಇಲ್ಲಿ ನೋಡಿ - ಒಪ್ಪಕ್ಕ ನೀರುಳ್ಳಿಬಜೆ ತಿಂಬದು!" ಹೇಳಿ.
ಎಲ್ಲೊರುದೇ ಬಂದು ನೋಡಿದವು, cenema ನೋಡಿದ ಹಾಂಗೆ ಕಂಡ್ತಿತ್ತೋ ಏನೋ -
ಹೊ ಹೊ ಹೊ ಹೊ, ಹ ಹ ಹ, ಹಿ ಹಿ ಹಿ - ಬೇರೆಬೇರೆ ಜನ ಬೇರೆ ಬೇರೆ ರೀತಿಲಿ ನಗೆಯಾಡಿದವು.
ತಿಂಬಲೆ ಹೆರಟ ನೀರುಳ್ಳಿಬಜೆ ಕೈಲೇ ಹಿಡ್ಕೊಂಡು ಅಜ್ಜಿಯ ಮೈಲಿ ಬಿದ್ದು ಕೂಗಲೆ ಸುರುಮಾಡಿದೆ.
ಅಜ್ಜಿ ಪುಟ್ಟುಮಾವಂಗೆ ಬೈದ ಮತ್ತೆಯೇ ಎನಗೆ ಸಮದಾನ ಆದದ್ದು.

ಆ ದಿನ ಮತ್ತೆ ನೀರುಳ್ಳಿ ಬಜೆ ತಿಂದಿದ್ನೋ - ಬಿಟ್ಟಿದನೋ ಗೊಂತಿಲ್ಲೆ, ಆದ್ರೆ "ಒಪ್ಪಕ್ಕಂಗೆ ನೀರುಳ್ಳಿ ಆವುತ್ತು" ಹೇಳಿ ಪ್ರಸಿದ್ಧ ಆಗಿಬಿಟ್ಟತ್ತು.
ಅದ್ರಿಂದ ಮತ್ತೆ ಸುಮಾರು ಕೇಜಿ ನೀರಳ್ಳಿಬಜೆ ತಿಂದಿಪ್ಪೆ, ಯಾರುದೇ ನಗೆಮಾಡಿದ್ದವಿಲ್ಲೆ.

ಈಗ ನೀರುಳ್ಳಿಬಜೆ ನೋಡಿದ್ರೆ ಪುಟ್ಟಮಾವಂಗೆ ಅಜ್ಜಿ ಬೈದ್ದೇ ನೆನ್ಪಾವುತ್ತು :-)

2 comments:

  1. ಎಂತ ಗೊಂತಿದ್ದಾ... ನಮ್ಮ ಬೇಂಕಿನ ಪ್ರಸಾದನ ಭಾವಂಗೂ ಒಂದಾರಿ ಇಂತದೇ ಅನುಭವ ಆಯಿದಡ. ಅವಕ್ಕೆ ಚಾಯ ಒಂದು ಮಾತ್ರ ಚಪ್ಪೆ ಕುಡಿವ ಅಭ್ಯಾಸ. ರುಚಿಗೆ. ಬೇರೆ ಎಲ್ಲಾ ಸ್ವೀಟ್ಸ್ ತಿಂತವು, ಕೇಸರಿಬಾತಂತೂ ರಾವು. ಕಿಲಗಟ್ಳೆ ತಿಂಗು ಇದಾ. ಹೀಂಗೆಯೇ ಒಂದಾರಿ ಒಂದು ಮನಗೆ ಹೋಗಿಪ್ಪಾಗ 'ಎನಗೆ ಚೆಪ್ಪೆ' ಹೇಳಿದವು. ಸರಿ, ಚೆಪ್ಪೆ ತಂದು ಕೊಟ್ಟವು. ಮತ್ತೆ ಉಂಬಲಪ್ಪಗ ಪಾಪ, ಇವರ favorite ಕೇಸರಿಬಾತ್ ತಿಂಬ ಭಾಗ್ಯವೇ ಬಯಿಂದಿಲ್ಲೆ. ಬಳುಸುವೋರು ಬಂದಪ್ಪಗಳೇ ಮನೆ ಯೆಜಮಾನ ಹೇಳಿದನಡ, ಅವಕ್ಕೆ ಚೆಪ್ಪೆ ಹೇಳಿ. ಪಾಪ ಆ ಭಾವನ ಮೋರೆ ನೋಡೆಕ್ಕಿತ್ತು ಆವಗ. ಅಂತೂ ನಮ್ಮ ಪ್ರಸಾದ ಭಾವ ಹೇಳಿ ಸರಿ ಮಾಡಿದನಡ. ಹ್ಹೆ ಹ್ಹೆ ಹ್ಹೆ.....

    ReplyDelete
  2. ಬೇಂಕಿನ ಪ್ರಸಾದApril 11, 2010 at 12:19 AM

    ಈ ಮಾಣಿಗೆ ಎನ್ನ ಭಾವನ ಸಂಗತಿ ಗೊಂತಾದ್ದು ಸಾಕು.... ಹ್ಹೆ ಹ್ಹೆ ಹ್ಹೆ. ಬೇರೆ ಕೆಲವು ದಿಕ್ಕೂ ಅವಂಗೆ ಇದೇ ಅನುಭವ ಆಯಿದಡ. ಆದರೂ ಚೆಪ್ಪೆ ಚಾಯದ ಮರ್ಳು ಬಿಟ್ಟಿದಿಲ್ಲೆ.

    ಸುಮಾರು ದಿನಂದ ಈ ಒಪ್ಪಕ್ಕನನ್ನೇ ಕಾಯ್ತಾ ಇತ್ತಿದ್ದೆಯೋ. ಕಾಣದ್ದೆ ಅಪ್ಪಗ ಒಂದಾರಿ ಗ್ರೇಶಿದೆಯೊ, ಎಲ್ಯಾರೂ ಮದುವೆ ಗಿದುವೆ ಆತೋ ಹೇಳಿಗೋಂಡು. ಹ್ಹೆ ಹ್ಹೆ ಹ್ಹೆ...

    ReplyDelete