Monday, July 12, 2010

ಬ್ಲಾಗ್ ಬರದರೆ Life ಪೂರ್ತಿ ಆವುತ್ತಾ?

ಎಂತ ಗೊಂತಿದ್ದಾ?
ಬ್ಲಾಗ್ ಬರದರೆ Life ಪೂರ್ತಿ ಆವುತ್ತಾ? - ಹೀಂಗೆ ಕೇಳಿದ್ದು ಎನ್ನ ಬೆಸ್ಟ್ friend ಶೈಲ. 


ಎಂಗಳಲ್ಲಿಗೂ ಅದರ ಮನೆಗೂ net ಬಂದದು ಒಟ್ಟೊಟ್ಟಿಂಗೆ.
ಎನ್ನ ಕಂಪ್ಯೂಟರಿಂಗೆ ಮೋಡೆಮ್ ಕನೆಕ್ಟ್ ಆಗಿ ಎರಡು ದಿನಲ್ಲಿ ಅದರದ್ದುದೇ up ಆಯಿದು.
ಎಂಗೊ ಒಟ್ಟಿಂಗೇ browse ಮಾಡ್ಳೆ ಸುರು ಮಾಡಿದ್ದು. 

ಮೊದಲೇ ಪೇಟೆಲಿಪ್ಪ Net Cefe ಲಿ ಬ್ರೌಸ್ ಮಾಡಿದ್ದರೂ, ಮನೆಲೇ ಆನ್ ಲೈನ್ ಬಂದದು ಒಟ್ಟೊಟ್ಟಿಂಗೇ. 
ಹೊಸ ಹೊಸ inventions ಒಟ್ಟೊಟ್ಟಿಂಗೇ ನೋಡಿದ್ದು. EMail ಐಡಿ ಯನ್ನುದೇ ಒಟ್ಟಿಂಗೇ Create ಮಾಡಿದ್ದು.
Orkut ಪ್ರೊಪೈಲ್ ಒಟ್ಟೊಟ್ಟಿಂಗೇ ಮಾಡಿದ್ದು. ಒಟ್ಟಿಂಗೆ ತುಂಬ ಚಾಟ್ ದೇ ಮಾಡಿಕೊಂಡು ಇತ್ತಿದ್ದೆಯೊ.
ಎಂಗಳ ಮನಸ್ಸಿಲಿ ಇದ್ದ ವೇವ್ ಲೆಂತ್ (wave length) ಮ್ಯಾಚ್ ಆಗಿಯೊಂಡಿತ್ತು.

ಕೆಲವು ಸರ್ತಿ ಅದು ಅದರ ಊರಿಗೆ ಹೋದ್ರೆ ಎರಡು ಮೂರು ದಿನಲ್ಲಿ phone ಅಥವಾ sms ಮಾಡಿ ಅದರ ಈಮೈಲ್ ಚೆಕ್ ಮಾಡ್ಳೆ ಹೇಳಿಕಂಡಿತ್ತು.
ಎಂಗ ಎಲ್ಲವನ್ನೂ share ಮಾಡಿಕೊಂಡು ಇತ್ತಿದ್ದೆಯೊ. ಈಮೈಲ್ ಐಡಿ, ಪ್ರೆಂಡ್-ಶಿಪ್, ಪಾಸ್ವರ್ಡ್ ಗೊ, ಎಲ್ಲವುದೆ.

ಮುಂದೆ ಅದರ ಮತ್ತೆ ಎನ್ನ Taste ಬದಲಪ್ಪಲೆ ಸುರು ಆತು.
ಎನಗೆ ಪುಸ್ತಕಲ್ಲಿ ಆಸಕ್ತಿ ಆದರೆ ಅದಕ್ಕೆ fashion ಲಿ, ಎನಗೆ ಬರವಣಿಗೆಲಿ ಹೆಚ್ಚು ಒಲವು, ಅದಕ್ಕೆ sports.
ಎಲ್ಲೋ ಒಂದು ಹಂತಲ್ಲಿ, ಎಂಗಳ ಇಬ್ರ wavelength ಮ್ಯಾಚೇ ಆವುತ್ಲೆ ಹೇಳುವಷ್ಟು difference ಆತು.
But still, ಎಂಗಳ friendship ಹಾಂಗೇ ಇತ್ತು. ಅದುವೆ ಅಲ್ಲದ - understanding.

ಮೊನ್ನೆ, ಇದ್ದಕ್ಕಿದ್ದ ಹಾಂಗೆ ಮನೆಗೆ ಬಂತು.
Mangalore ಲಿ ದೊಡ್ಡ fashion shop ಓಪನ್ ಆಯಿದು, ಸುನಿಲ್ ಶೆಟ್ಟಿ ಬಯಿಂದಡ - ಹೋಪನ ಕೇಳಿತ್ತು.
ಓಹ್! ನೋ!! ಎನಗೆ ಎಕ್ಸಾಮ್ ಮುಗುದು, ಈಗ ಜಸ್ಟ್ ರಜೆ ಸಿಕ್ಕಿದ್ದಷ್ಟೆ.
ಸುಮಾರು ದಿನದ ಬ್ಲಾಗ್ ಅಪ್ಡೇಟ್ ಬಾಕಿ ಇತ್ತು. readers ಕೆಲವು ಜನ ಮೈಲ್ ಮಾಡ್ಳೆ start ಮಾಡಿತ್ತಿದ್ದವು.
ಅದಲ್ಲದ್ದೆ ಇಂದು headache ಜೋರಿತ್ತು. ಎರಡುಮೂರು ಗಂಟೆ ನಿಂದೊಂಡು ಶಾಪ್ ಮಾಡುವಷ್ಟು ಪೇಶೆನ್ಸ್ ಇತ್ತಿಲ್ಲೆ.
So, ಇಂದು ಬೇಡ, ಇನ್ನೊಂದರಿ ಹೋಪ - ಹೇಳಿದೆ.

ಅದಕ್ಕೆ ಎನ್ನ ಈ ಆನ್ಸರಿಂದ ತುಂಬಾ disappoint ಆತು ಹೇಳಿ ಕಾಣ್ತು. But ಎನ್ನ feelings ಗಳ ಅರ್ತವೇ ಮಾಡಿದ್ದಿಲ್ಲೆ ಆ friend.

ಮನೆಲಿ ಕೂದು ಎಂತ ಮಾಡ್ತೆ ನೀನು? ಕೇಳಿತ್ತು.
ಎಷ್ಟೋ ದಿನಂದ ಪೆಂಡಿಂಗ್ ಇಪ್ಪ ಬ್ಲಾಗ್ ಅಪ್-ಡೇಟ್ ಮಾಡ್ತೆ.. ಹೇಳಿದೆ, ಕೂಲ್ ಆಗಿ!

ಅಷ್ಟಪ್ಪಗ ಅದು ಕೇಳಿದ ಮಾತೇ ಇಂದ್ರಾಣ ಟೈಟಲ್.
ಬ್ಲಾಗ್ ಬರದರೆ ನಿನ್ನ Life ಪೂರ್ತಿ ಆವುತ್ತಾ? ಲೈಫ್ ಲಿ ಎಲ್ಲವನ್ನೂ ಅನುಬವಿಸಿರೆಕ್ಕು. ಈ age ಲಿ ಬ್ಲಾಗ್, ರೈಟಿಂಗ್ ಹೇಳಿ ಸುಮ್ಮನೆ ಕಂಪ್ಯೂಟರ್ ಎದುರು ಕೂರೆಡ, ರಜ ಹೆರ ತಿರುಗುವ, ಮುಂದೆ ಗಂಡ, family ಹೇಳಿ ಒಂದೊಂದೇ ಸೇರುವಗ ಜೀವಮಾನ ಇಡೀ ಮನೆ ಒಳವೇ ಇರೆಕ್ಕು.
ಈಗ ತಿರುಗುವ right time ಹೇಳಿತ್ತು.
ಆ ದಿನ ಮತ್ತೆ ಇಬ್ರೂ ಮ್ಯಾಂಗಲೋರ್ ಗೆ ಹೋಗಿ, ಅದಕ್ಕೆ ಬೇಕಾಗಿ ಶಾಪ್ ಮಾಡಿ ಬಂದದು. ಈ ತರ ಎಷ್ಟೋ adjustments ಬೈಂದು life ಲಿ. ಇದೆಂತ ಹೊಸತ್ತಲ್ಲ.

ಒಂದೇ ಕ್ಲಾಸ್, ಒಂದೇ age, ಆದರೆ thinking ಎಷ್ಟು different, ಅಲ್ಲದಾ?
Still, we are best friends.

ಅದರ ರಿಲೇಟಿವ್ ಮನೆಗೆ ಹೋಯಿದು. ಒಂದು ವೀಕ್ ಕಳುತ್ತು!
I miss her now.

Saturday, April 10, 2010

ನೀರುಳ್ಳಿಬಜೆ ತಿಂಬಗ ಎಲ್ಲೊರುದೇ ನೆಗೆಮಾಡಿದವು, ಗೊಂತಿದ್ದಾ?

ಎಂತ ಗೊಂತಿದ್ದಾ!
ಹಳೆಯ ನೆನಪ್ಪು ಎಲ್ಲ ಮಸ್ಕು ಮಸ್ಕು ಆದಷ್ಟು ಅದ್ರ ರುಚಿ ಜಾಸ್ತಿ ಹೇಳಿ ಚಟ್‌ಪಟಾಕಿ ಹೇಳ್ತ.
ಅಪ್ಪ? ಉಮ್ಮಪ್ಪ!

ಇದು ಎನ್ನ Nostalgia (Old memories)ಗಳಲ್ಲಿ ಒಂದು.
ಸಣ್ಣಾಗಿಪ್ಪಗ ಅಜ್ಜನ ಮನೆಗೆ ಹೋಪದು ಹೇಳಿರೆ ಒಂದು ಕುಶಿ..
ಅಲ್ಲಿ ಬಾವಂದ್ರು, ಅತ್ತಿಗೆ ಎಲ್ಲ ಆಟ ಆಡುದು. ಬೊಬ್ಬೆ ಗಲಾಟೆ ಆಗಿ ’ಸುಮ್ಮನೆ ಕೂತುಕೊಳಿ ಮಕ್ಕಳೆ ನಿಂಗೊ’ ಹೇಳಿ ಅಮ್ಮ ಜೋರು ಮಾಡುವ ವರೆಗೂ full busy.
ಜೋರು ಮಾಡಿರೆ ಮತ್ತೆ full silent ಆಗಿ ಬಿಡ್ತು!

ಎನಗೆ ಸಣ್ಣ ಇಪ್ಪಾಗ ನೀರುಳ್ಳಿ (Onion) ಮೆಚ್ಚಿಗೊಂಡು ಇತ್ತಿಲ್ಲೆ. ನೆಂಟ್ರಮನೆಗೆ ಹೋಗಿಪ್ಪಗ ಎಲ್ಲ ಅಪ್ಪಮ್ಮ "ನೀರುಳ್ಳಿ ಹಾಕಿದ್ದಾ?ಒಪ್ಪಕ್ಕಂಗೆ ಕೊಡೆಡಿ" ಹೇಳಿಕೊಂಡು ಇತ್ತಿದ್ದು ನೆನಪ್ಪು ಬತ್ತು. ಆನಾಗಿಯೇ ನೀರುಳ್ಳಿ ಆಗ ಹೇಳಿದ್ದು ನೆನಪ್ಪಿಲ್ಲೆ. ಎನ್ನ ಅಪ್ಪಮ್ಮ ಹೇಳುದು ಕೇಳಿಯೇ ಎನಗೆ ನೀರುಳ್ಳಿ ಆಗ ಹೇಳಿ ಆದ್ದು. Mostly, ಅದರಿಂದ ಮೊದಲು ಯಾವದೋ ಒಂದು ಹಂತಲ್ಲಿ ಆನು ಬೇಡ ಹೇಳಿದ್ದನೋ? ಉಮ್ಮಪ್ಪ!
ಸಣ್ಣಾಗಿಪ್ಪಗ ಎಲ್ಲ ಒಂದರಿ ಆಗ ಹೇಳಿ ಕಂಡ್ರೆ ಮತ್ತೆ try ಮಾಡ್ಳೇ ಇಲ್ಲೆ. ಅಲ್ದಾ?

ಮಾಡಾವತ್ತೆಯ ಮನೆಲಿ ಆದರೆ ಬಳಕೆ ಕಮ್ಮಿ, ಹಾಂಗಾಗಿ ಏನೂ ತೊಂದರೆ ಇಲ್ಲೆ. ಆದರೆ ಮಡಿಕೇರಿ ಮಾವನಲ್ಲಿಗೆ ಹೋದ್ರೆ ಅಲ್ಲಿ ನೀರುಳ್ಳಿ ಹಾಕದ್ದೆ ಅಡಿಗೆಯೇ ಮಾಡಿಕೋಂಡು ಇತ್ತಿದ್ದವಿಲ್ಲೆ. ಎನ್ನ ಅಪ್ಪಮ್ಮಂಗೆ ಎನ್ನ ಆಹಾರ ನೋಡುದೇ ಕೆಲ್ಸ ಆಗಿತ್ತು. ಹೋಟೆಲಿಗೆ ಹೋದರೆ ಅಂತೂ, ಅದು ಬೇಡ, ಇದುಬೇಡ ಹೇಳಿ ಎನ್ನ list ತುಂಬಾ ಉದ್ದ ಇತ್ತು.

ಒಂದರಿ ಅಜ್ಜನ ಮನೆಗೆ ಹೋಗಿದ್ದ ಸಮಯ.
ಆ ದಿನ, ರಜೆ ಇದಾ, ಹಾಂಗೆ ಎಲ್ಲರು ಆಡಿಗೊಂಡು ಇತ್ತಿದ್ದವು.
ಅತ್ತೆಕ್ಕೊ, ಮಕ್ಕೊ ಎಲ್ಲ ಯಾವಗಳೂ ಇದ್ದರೂ, ಮಾವಂದ್ರು ಮನೆಲಿ ಇಪ್ಪದು ತುಂಬ ಅಪುರೂಪ. ಅಂದು ಮೂರು ಜನ ಮಾವಂದ್ರು ಮನೆಲೇ ಇತ್ತಿದ್ದವು. ಎಲ್ಲಾ ಮಾವಂದ್ರು, ಅತ್ತೆಕ್ಕೊ, ಅತ್ತಿಗೆ, ಬಾವಂದ್ರು ಮನೆಲಿ ಇದ್ದಕಾರಣ ಎಲ್ಲರು ತುಂಬ bizi....!

ಹೊತ್ತಪ್ಪಗ ಚಾ ಕುಡಿವಲಪ್ಪಗ ಎಂತಾರು ತಿಂಡಿ ಮಾಡುದು ಅಜ್ಜಿಯ ಕ್ರಮ.
ಎಲ್ಲರು ಕೂದುಗೊಂಡು ತಿಂಬಲೆ ಒಳ್ಳೆ ಆವುತ್ತಲ್ದ, ಅದಕ್ಕೆ.

ಆ ದಿನ ಒಂದು ಪರಿಮ್ಮಳದ ಹೊರುದ ತಿಂಡಿ ಮಾಡಿದವು.
ಅತ್ತೆಯವು, ಅಮ್ಮ ಎಲ್ಲ ಒಳ ಕೆಲಸಕ್ಕೆ ಸೇರಿತ್ತವು, ಹೊರುದ್ದು ಅಜ್ಜಿ.
ಹೊರಿವನ್ನಾರ ಅದುಎಂತದು ಹೇಳಿಯೇ ನೋಡ್ಳೆ ಹೋಯಿದಿಲ್ಲೆ ಎಂಗೊ - ಹೊರಿವಗ ಅದರ ಸ್ಮೆಲ್ ಬಂತಲ್ಲ - ವಾಹ್!


ರಜ ಹೊತ್ತಿಲ್ಲೇ Coffee ತಯಾರಾತು!
ಕಾಫಿ + ಆ ಪರಿಮಳದ ತಿಂಡಿ, ಎರಡೂ ಒಟ್ಟಿಂಗೆ ತಂದು ಹೆರ ಮಡಿಗಿದವು.
ಹೆಮ್ಮಕ್ಕೊ ಒಳ ತಯಾರಿ ಮಾಡಿ ಮಾಡಿ ಹೆರ ಕೂದ ಮಾವಂದ್ರಿಂಗೆ ತಂದು ಕೊಟ್ಟವು.
ಮಾವಂದ್ರು ತಟ್ಟೆ ಕಾಲಿ ಮಾಡಿಮಾಡಿ ಅತ್ತೆಕ್ಕಳ ಹತ್ರೆ ಇನ್ನೂ ತಪ್ಪಲೆ ಹೇಳ್ತಾ ಇತ್ತವು.
ಎಲ್ಲರಿಂಗೂ ಹಂಚಿಗೊಂಡು ಬಪ್ಪಗ ಅತ್ತೆ ಎನ್ನತ್ರವೂ ತಂದವು.
ಪರಿಮ್ಮಳ ಕೇಳಿ ತಿನ್ನೆಕ್ಕೂಳೆ ಆಶೆ ಆತು, ಆದ್ರೆಂತ ಮಾಡುದು..
ಪುಟ್ಟುಮಾವ - ಓ ಅಲ್ಲಿ ಕೂತುಕೊಂಡು ಜೋರು ಹೇಳಿದವು "ಏಯ್, ಅದು ನೀರುಳ್ಳಿ ಹಾಕಿದ್ದು. ಒಪ್ಪಕ್ಕಂಗೆ ಆಗ..!" ಹೇಳಿ.
ಚೇ! ಈ ತಿಂಡಿಗೂ ನೀರುಳ್ಳಿ ಹಾಕಿದ್ದ? ಚೆ ಚೆ.
ಬೇಜಾರಾತು.
ಕಾಫಿ ಮಾತ್ರ ಕುಡ್ದು ಎದ್ದೇಬಿಟ್ಟೆ.

ಒಳ ಹೋಗಿ ನೋಡುವಗ ಅಜ್ಜಿ ಇನ್ನೂ ಹೊರ್ಕೊಂಡು ಇತ್ತವು.
ಅಜ್ಜಿಯತ್ರ ಪೂಸಿಹೊಡದು ಮೆಲ್ಲ ಕೇಳಿದೆ, ಅಜ್ಜೀ - ಒಂದು ತುಂಡು ತಿನ್ನೆಕ್ಕಾ..? - ಹೇಳಿ..
ಅಜ್ಜಿಗೆ ಎನಗೆ ಆಸೆ ಆದ್ದು ಅರ್ತ ಆತು.
ತಿನ್ನು ಒಪ್ಪಕ್ಕೋ, ಇದಾ - ಹದಾ ಬಿಸಿಯ ಒಂದು ತೆಗದು ಕೊಟ್ಟವು.
ಅಜ್ಜಿಯ ಮೇಲೆ ತುಂಬ ಕುಶಿ ಆತು!

ಅದ್ರ ಕೈಲಿ ಹಿಡ್ಕಂಡು ತಿಂಬಲೆ ಹೆರಾಡುವಗ ಪುಟ್ಟುಮಾವ ಎಂತಕೋ ಒಳಬಂದವು ನೋಡಿದವು.
ಅವ್ರದ್ದು ಬೊಬ್ಬೆ ಬಾಯಿ - ಜೋರು ಹೇಳಿದವು, "ಇದಾ, ಇಲ್ಲಿ ನೋಡಿ - ಒಪ್ಪಕ್ಕ ನೀರುಳ್ಳಿಬಜೆ ತಿಂಬದು!" ಹೇಳಿ.
ಎಲ್ಲೊರುದೇ ಬಂದು ನೋಡಿದವು, cenema ನೋಡಿದ ಹಾಂಗೆ ಕಂಡ್ತಿತ್ತೋ ಏನೋ -
ಹೊ ಹೊ ಹೊ ಹೊ, ಹ ಹ ಹ, ಹಿ ಹಿ ಹಿ - ಬೇರೆಬೇರೆ ಜನ ಬೇರೆ ಬೇರೆ ರೀತಿಲಿ ನಗೆಯಾಡಿದವು.
ತಿಂಬಲೆ ಹೆರಟ ನೀರುಳ್ಳಿಬಜೆ ಕೈಲೇ ಹಿಡ್ಕೊಂಡು ಅಜ್ಜಿಯ ಮೈಲಿ ಬಿದ್ದು ಕೂಗಲೆ ಸುರುಮಾಡಿದೆ.
ಅಜ್ಜಿ ಪುಟ್ಟುಮಾವಂಗೆ ಬೈದ ಮತ್ತೆಯೇ ಎನಗೆ ಸಮದಾನ ಆದದ್ದು.

ಆ ದಿನ ಮತ್ತೆ ನೀರುಳ್ಳಿ ಬಜೆ ತಿಂದಿದ್ನೋ - ಬಿಟ್ಟಿದನೋ ಗೊಂತಿಲ್ಲೆ, ಆದ್ರೆ "ಒಪ್ಪಕ್ಕಂಗೆ ನೀರುಳ್ಳಿ ಆವುತ್ತು" ಹೇಳಿ ಪ್ರಸಿದ್ಧ ಆಗಿಬಿಟ್ಟತ್ತು.
ಅದ್ರಿಂದ ಮತ್ತೆ ಸುಮಾರು ಕೇಜಿ ನೀರಳ್ಳಿಬಜೆ ತಿಂದಿಪ್ಪೆ, ಯಾರುದೇ ನಗೆಮಾಡಿದ್ದವಿಲ್ಲೆ.

ಈಗ ನೀರುಳ್ಳಿಬಜೆ ನೋಡಿದ್ರೆ ಪುಟ್ಟಮಾವಂಗೆ ಅಜ್ಜಿ ಬೈದ್ದೇ ನೆನ್ಪಾವುತ್ತು :-)

Tuesday, September 15, 2009

ಎನ್ನ favorite ಚೂಡಿ ಎಲಿ ತಿಂದತ್ತು :-(

ಎಂತ ಗೊಂತಿದ್ದಾ?

ಎನಗೆ ಯಾವಾಗಲೂ ಹೀಂಗೇ ಅಪ್ಪದಾ ಹೇಳಿ...
ಕೆಲವು ಸರ್ತಿ ಮನಸ್ಸು ಸಿಕ್ಕಿ ಹಾಕಿಯೊಂಬದು, ತುಂಬ ಹೊತ್ತು ಬಿಡುಸಿಕೊಂಬಲೇ ಸಾಧ್ಯ ಆವುತ್ತಿಲ್ಲೆ.
Reason ತುಂಬ ಸಣ್ಣಗಿರ್ತು. ತಲೆಬಿಸಿ ತುಂಬ ದೊಡ್ಡಗಿರ್ತು. :(
ಮನಸ್ಸಿಂಗೆ ಹತ್ತರೆ ಆದ ವಿಶಯಂಗ sudden ಆಗಿ ದೂರ ಹೋಗಿಬಿಟ್ರೆ ತುಂಬ ಹೊತ್ತು ಮನಸ್ಸು doped ಆಗಿರ್ತು. ಅಲ್ಲದಾ?
ಎನ್ನ ಅನುಭವದ ಒಂದು ವಿಶ್ಯ ಹೇಳ್ತೆ, ಕೇಳಿ.

ಎನ್ನದು PU complete ಆದ time ಲಿ ಎನಗೆ ಮನೆಲಿ ಒಂದು ಚೂಡಿ(choodidaar) ತೆಗದಿತ್ತಿದ್ದವು. ಆನೆಂತ ಹಟ ಮಾಡಿ ತೆಗೆಶಿದ್ದಲ್ಲ ಆತಾ, ಮನೆಲಿ ತೆಗದು ಕೊಟ್ಟದು.
ಒಳ್ಳೆ color. Reddish pinkಲಿ black border. ಎನ್ನ ಇಷ್ಟದ್ದು. ಕೇಳದ್ದೆ ಬಂದ ಇಷ್ಟದ ಕಲರ್ ಆದ ಕಾರಣ dress ತುಂಬ ಹಿಡುಸಿತ್ತಿದ್ದು. ಒಂದೇ ಮಾತಿಲಿ ಹೇಳೆಕ್ಕಾರೆ ಎನ್ನ favorite dress ಆಗಿತ್ತು. ಎನ್ನ neighbor friend ರೇಷ್ಮಂಗೂ ಆ ಕಲರ್ ತುಂಬ ಇಷ್ಟ.

Starting ಅದರ ಅಷ್ಟಾಗಿ use ಮಾಡಿಯೊಂಡು ಇತ್ತಿಲ್ಲೆ. ಆದ್ರೂ functionsಗೊಕ್ಕೆ ಎಲ್ಲ ಅದನ್ನೇ ಹಾಕಿಯೊಂಡು ಇದ್ದದು.
ಎಷ್ಟೋ ಕೂಸುಗೊ (ಮಾಣಿಯಂಗಳೂ ;-) ) ಎನ್ನ ಆ ಡ್ರೆಸ್ಸಿಲೇ ಗುರ್ತ ಹಿಡುಕ್ಕೊಂಡು ಇತ್ತಿದ್ದವು. 'ಎಂತಪ್ಪ, ಈ ಕೂಸಿನತ್ರೆ ಅದೊಂದೇ dress ಇಪ್ಪದಾ?’ ಹೇಳಿಯೂ ಹೇಳಿಕ್ಕು ಕೆಲವು ಜನ.
ಎನಗುದೇ ಹಾಂಗೆ, ಅದರ ಹಾಕಿರೆ ತುಂಬ comfort ಅನಿಸಿಗೊಂಡು ಇತ್ತು. ಆರತ್ರೆ ಮಾತಾಡುವಗಳೂ ಎಂತ hesitation ಇತ್ತೇ ಇಲ್ಲೆ. ಆ ಡ್ರೆಸ್ಸ್ ಎನಗೆ ರಜ confidence ಕೊಟ್ಟಿದು ಹೇಳಿರೂ ತಪ್ಪಲ್ಲ. Dress ನವಗೆ confidence ಕೊಡ್ತು ಹೇಳುದು ಎನಗೆ ಅದರಿಂದ ಗೊಂತಾಗಿತ್ತು.

ನಿಧಾನಕ್ಕೆ Functions ಗೊಕ್ಕೆ ಹಾಕಿಯೊಂಡಿದ್ದ ಆ dress ನ color ಎಲ್ಲ dim ಅಪ್ಪಲೆ ಸುರು ಆತು. 'ಕಲರ್ fade ಆದ್ದರ ಇನ್ನು ಹಾಕೆಡ ಮಗಳೇ’ ಹೇಳಿತ್ತು ಅಮ್ಮ. ಅಮ್ಮ ಹಾಂಗೆಯೇ, ಎನಗೆ ಬೇಕಾದ suggestions ಗಳ ಬೇಕಾದ timeಗೆ ಕೊಡ್ತು. ಎನಗೆ ಒಂದು friend ನ ಹಾಂಗೆ feel ಆವುತ್ತು ಅಮ್ಮನ. ಮನೆ ಒಳ ಇಪ್ಪ best friend ಎನ್ನಮ್ಮ. ಮನೆ ಹೆರ ಹೋದರೆ ರೇಷ್ಮ ಇದ್ದು. ಅದುದೇ ಹಾಂಗೆ jealousy ಇಲ್ಲದ್ದ close friend. ಈಗ ಅದಕ್ಕೆ ಇನ್ನೊಂದು friend ಸಿಕ್ಕಿದ್ದು, ಅದಿರ್ಲಿ.
ಅಮ್ಮ ಹಾಂಗೆ ಹೇಳಿದ ಮತ್ತೆ ಆ ಚೂಡಿಯ use ಕಮ್ಮಿ ಮಾಡಿದೆ.
ಆದರೂ Dance classಗೆ  ಹೋಪಗ, ರೇಷ್ಮನ ಮನೆಗೆ evening visit ಹೋಪಗ ಎಲ್ಲ use ಮಾಡಿಯೊಂಡು ಇತ್ತಿದ್ದೆ.
ಮತ್ತೆ ರಜ ಸಮಯಲ್ಲಿ ಅದರ ಲುಕ್ ಹೋದಮತ್ತುದೇ ಮನೆಲೇ use ಮಾಡಿಗೊಂಡು ಇತ್ತಿದ್ದೆ. Night dress ನ ಹಾಂಗೆ.
ಅಷ್ಟುದೇ attachment ಆ ಡ್ರೆಸ್ ನ ಮೇಲೆ.

ಮುಂದೆ ಒಂದು ದಿನ ಅದು missing!!!
ಯಾವ ದಿನಂದ ಕಾಣೆ ಆದ್ದು ಹೇಳಿ ಎನಗೂ ನೆಂಪಿಲ್ಲೆ. ತುಂಬ ಆಸಕ್ತಿ ಮೀರಿ ಹುಡುಕ್ಕಲೆ ಹೋಯಿದಿಲ್ಲೆ. ಎಲ್ಲಿಗೆ ಹೋವುತ್ತು, ಇಲ್ಲೇ ಇಕ್ಕು ಎನ್ನ wardrobeನ ಒಳ ಹೇಳಿ ಗ್ರೇಶಿದೆ. ಹಾಂಗೆ ಮರದೇ ಹೋತು ಅದು.

ಒಂದು ದಿನ ಮನೆಲಿ cleaning ಮಾಡುವಗ, wardrobe ನ top compartment ನ ಒಳ ಒಂದು box ಇದ್ದದು ಸಿಕ್ಕಿತ್ತು. actually ಅದು computer monitor ತಂದ ಪೆಟ್ಟಿಗೆ. ಅದರ ಒಳ pink pink ವಸ್ತ್ರದ ಕುರುಹು ಇದ್ದ ಹಾಂಗೆ ಕಂಡತ್ತು.
ತೆಗದು ಕೆಳ ಮಡುಗಿ ಸರೀ ನೋಡುವಗ ಅದು ಎನ್ನ ಆ ಚೂಡಿಯ shawll!!! ಮತ್ತುದೇ box ನ ಸರೀ ತೆಗದು ನೋಡಿರೆ, ಇಡೀ ಆ ಚೂಡಿಯೇ ಅಲ್ಲಿ ತುಂಡು ತುಂಡು ಆಗಿ ಬಿದ್ದುಗೊಂಡು ಇತ್ತು.

ಕಾಣೆ ಆದ ಆ ಚೂಡಿ ಆ box ನ ಒಳ ಇತ್ತು. ಅಲ್ಲಿಯೇ ಇದ್ದದರ ಯಾವಗಳೋ ಎಲಿ ತಿಂದು ಹಾಕಿತ್ತಿದ್ದು.
ಆನು ಅದರ use ಮಾಡುದು ಅಂದೇ ನಿಲ್ಲುಸಿದ್ದರೂ, ಅದರ ಮೇಲೆ ಇದ್ದ sentimental attachment ಹಾಂಗೇ ಇತ್ತು.
ಅಂದಿಂದ ಕಾಣೆ ಆಗಿದ್ದರೂ ’ಎಲ್ಲಿಯೋ ಇದ್ದು’ ಹೇಳಿ ಮನಸ್ಸು ಸಮಾದಾನ ಮಾಡಿಯೊಂಡು ಇತ್ತು. but, ಈಗ ಅದೇ ಚೂಡಿ ತುಂಡುಗೊ ಆಗಿತ್ತು.
ನಿನ್ನೆ ಒರೆಂಗೆ ಆಗದ್ದ ಆ sadness ಇಂದು ಆತು.. I felt very bad.

ಪ್ರಯತ್ನಪಟ್ರೆ ಅದೇ color combinations  ನ ಡ್ರೆಸ್ಸ್ ಸಲ್ವಾರ್sectionಲಿ ಸಿಕ್ಕುಗು. ಸಿಕ್ಕಿರುದೇ ಅದು ಈ Dress ಆವುತ್ತಿಲ್ಲೆನ್ನೆ.

ನಮ್ಮ ಮನಸಿಂಗೆ ಹತ್ತರದ್ದು ನಮ್ಮ ಒಟ್ಟಿಂಗೆ ಇದ್ದರೆ ಅದರ value ಗೊಂತೇ ಆವುತ್ತಿಲ್ಲೆ, but, ಅದು ನಮ್ಮ ಕೈಂದ ದೂರ ಹೋಪಗ ಅದರ ನಿಜವಾದ ಬೆಲೆ ಗೊಂತಪ್ಪದು. ದೂರ ಹೋಗಿ ಆದ ಮತ್ತೆ, ’ಚೆ, ಮತ್ತೆ ಬರ್ಲಿ’ ಹೇಳಿ ಹೇಳಿಯೊಂಡು ಇರ್ತು.
ಅಲ್ಲದಾ?

ನಿಂಗೊಗೂ ಈ ತರ experience ಆಯಿದಾ? ಆದರೆ ತಿಳಿಸಿ.

ನಮಸ್ತೇ.

Sunday, February 1, 2009

ಒಪ್ಪಕ್ಕ ಎಂತರ ಬರೆತ್ತು?

ಇಲ್ಲಿಗೆ ಬಪ್ಪ ಎಲ್ಲೊರಿಂಗೂ ಒಂದು ಸಂಶಯ, ಒಪ್ಪಕ್ಕ ಆರು? ಇಲ್ಲಿ ಅದು ಎಂತರ ಬರವದು?

ಒಪ್ಪಣ್ಣನ ಎಲ್ಲೊರಿಂಗೂ ಗುರ್ತ ಆಯಿದು ಈಗ. ಆದರೆ ಒಪ್ಪಕ್ಕನ ಗುರ್ತ ಇಲ್ಲೆ, ಅಲ್ದಾ?.
ಇದು ಒಪ್ಪಣ್ಣನ ಮನೆ ತಂಗೆ ಒಪ್ಪಕ್ಕ ಅಲ್ಲ. ಬೇರೆ.
ಹಾಂಗೆ ನೋಡಿರೆ ಒಪ್ಪಕ್ಕ ಹೇಳುದು ತುಂಬ ಸಾಮಾನ್ಯ ಶಬ್ದ. ಎಂಗಳ ಮನೆಲಿಯೂ ಎನ್ನ ಒಪ್ಪಕ್ಕ ಹೇಳಿ ಹೇಳುದು.

ಆನು ಕಂಡ ಹಾಂಗೆ ಕೂಸುಗಳ ಮನಸ್ಸಿನ ಆರುದೇ ಅರ್ತ ಮಾಡಿಗೊಂಡಿದವಿಲ್ಲೆ ,ಮಾಡಿಗೊಳ್ತವೂ ಇಲ್ಲೆ. ಎಲ್ಲೊರು ಅವರ ಅವರ ಆಲೋಚನೆಗೆ- ವಿವೇಚನೆಗೆ ಕಂಡ ಹಾಂಗೆ ಹೇಳುತ್ತವು. ಈ ಬ್ಲಾಗ್ ಲಿ ಇಂಟ್ರೆಸ್ಟಿಂಗ್ ವಿಷಯಂಗಳ & social life ನ ಹವ್ಯಕ ಭಾಶೆಲಿ ಬರೆತ್ತೆ.

Encourage ಮಾಡಿ, Please…

ಎನ್ನದು ಪುತ್ತೂರಿಲಿ ಮನೆ. ಈಗ ಕಾಲೇಜ್ ಗೆ ಹೋವುತ್ತಾ ಇದ್ದೆ. ಬರವಣಿಗೆ ಎನ್ನ ಆಸಕ್ತಿ. ಸಂಗೀತದ ಬಗೆಗೆ ವಿಶೇಷ ಒಲವು ಇದ್ದು.
ಮನೆಲಿ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಇದ್ದು. ಪುರುಸೊತ್ತಪ್ಪಗ ಬ್ಲಾಗ್ ಅಪ್ಡೇಟ್ ಮಾಡ್ತೆ.

ನಮಸ್ತೇ.

Saturday, January 3, 2009

ಎಂತ ಗೊಂತಿದ್ದ?

ಒಪ್ಪಣ್ಣ ಒತ್ತಾಯ ಮಾಡಿದವು ಹೇಳಿ ಒಂದು ಸುರು ಮಾಡಿದ್ದು. ಬರೇಕಷ್ಟೇ. ಪರೀಕ್ಷೆ ಮುಗಿಯಲಿ ಹೇಳಿ ಕಾವದು, ಮತ್ತೆ ಬರೆತ್ತೆ ಆತ.

ಹೇಳಿದಂಗೆ, ಒಪ್ಪಣ್ಣ ಇಲ್ಲಿದ್ದವು : http://oppanna.blogspot.com